ಸಾವಿರ ಸಾವಿರ ಬಾರಿ ಅಂದ್ಕೊತಿನಿ ಇವತ್ತು ಇದನ್ನು ಇಲ್ಲಿಗೆ ಮುಗಿಸಬೇಕು ಅಂತ. ಆದ್ರೆ ಮತ್ತೆ ಮತ್ತೆ , ಕಾಡಿ ಕಾಡಿ, ತನ್ನೆಡೆಗೆ ಸೆಳೆದು ಕೊಳ್ಳು (ಕೊಲ್ಲು)ತ್ತೆ ಆ ಮಾಯೆ. ಅದರ ಮಾಯಾವಿ ಶಕ್ತಿಯೇ ಅಂಥದ್ದು, ಬೇಕು ಅಂದ್ರೆ ಬೇಡ ಅನ್ನುತ್ತೆ, ಬಿಟ್ ಬಿಟ್ರೆ ಬಂದು ತಬ್ಬುತ್ತೆ.
ನೀವದನ್ನು ಚಟ ಅನ್ನಬಹುದು, ವೀಕ್ ಮೈಂಡ್ ಅನ್ನಬಹುದು, ಹವ್ಯಾಸ ಅನ್ನಬಹುದು, ಅದೃಷ್ಟ ಅನ್ನಬಹುದು, ಏಕಾಗ್ರತಾಹೀನ ಅನ್ನಬಹುದು, ಅಥವಾ ಬೇರೆ ಏನೋ ಅಂತ ಹೇಳಿಬಿಡಬಹುದು. ನನ್ನ ಪ್ರಕಾರ ಅದನ್ನು ಒಂದು ಪದದಲ್ಲಿ ವಿವರಿಸೋದು ಕಷ್ಟ ಅಂತ ಭಾವಿಸ್ತೀನಿ. ಏಕೆಂದರೆ ಅದು ನಮಗೆ ಎಲ್ಲವನ್ನು ಕಲಿಸಿರುತ್ತೆ. ಭಯ, ಪ್ರೀತಿ, "ವಿನಯ", ಆಸೆ, ಖುಷಿ, ಮೋಸ, ನೋವು, ತ್ಯಾಗ, ಎಲ್ಲದರ ಅನುಭವವನ್ನು ಧಾರಾಳವಾಗಿ ಧಾರೆ ಎರೆದು ಕೊಟ್ಟಿರುತ್ತೆ.
ಎಲ್ಲದರ ನಂತರವೂ ನಾವು ಅದನ್ನ ಮುಂದುವರೆಸಿಕೊಂಡು ಹೋಗ್ತಾ ಇರ್ತಿವಿ. ಉದಾಗೆ ಸಿಗರೇಟ್ ಸೇದೊನು ಭಯ, ಖುಷಿ, ನೋವು ಎಲ್ಲವನ್ನು ಅದರ ಮುಖಾಂತರ ಅನುಭವಿಸಿರುತ್ತಾನೆ, ಸಿಗರೇಟ್ ಸೇದಿಲ್ಲ ಅಂದ್ರೆ ಅವನಿಗೆ ಏನನ್ನು ಮಾಡಲಿಕ್ಕೆ ಆಗೊಲ್ಲ ಅನ್ನೋ ನಿರ್ಧಾರಕ್ಕೆ ಬಂದಿರ್ತಾನೆ. ಪ್ರೀತಿಸುವ ಹುಡುಗನಿಗೆ ತನ್ನ ಹುಡುಗಿಯ ಪ್ರೀತಿಯಿಲ್ಲದೆ ಬದುಕೇ ಇಲ್ಲ ಎಂಬ "ಭಾವ". ತಾಯಿಗೆ ಎಲ್ಲವೂ "ಕೃಷ್ಣಾ"ರ್ಪಣ ಮಸ್ತು. ಸರ್ವರೂ ಹೀಗೆ ಒಂದಲ್ಲೊಂದು ವಿಷಯದಲ್ಲಿ ತಮ್ಮ "ತಮ್ಮ" ನಂಬಿಕೆಗೆ ಕಟಿ ಬದ್ದರು.
ವಿಷಯ ಯಾವುದೇ ಆಗಲಿ ಅದರಲ್ಲಿರುವ ನಂಬಿಕೆ ಒಂದೇ. ಅಷ್ಟರಲ್ಲೂ ಪ್ರತಿ ದಿನ ನಾವು ಬದುಕಿಗೆ ಬೇಕಾದ್ದನ್ನು "ನವೀನ" ರೀತಿಯಲ್ಲಿ ಕಲಿತಾ ಹೋಗ್ತಿವಿ,
ಆದ್ರೆ ಬರಿ ಕಲಿತರೆ ಸಾಕಾಗೋದಿಲ್ಲ,
ಕಲಿತದ್ದನ್ನು ಅಳವಡಿಸಿಕೊಳ್ಳಬೇಕಲ್ವ?
Saturday, November 27, 2010
Monday, November 22, 2010
ಭಾವನೆಗಳಿಗೂ ವೇಳಾಪಟ್ಟಿ ಹಾಕುವ ಅನಿವಾರ್ಯತೆ
ಕಣ್ಣು ತೋಯ್ದಿತ್ತು, ಒಬ್ಬನೇ ಅಂಥರ್ಮುಕಿಯಾಗಿ ಅದೆಷ್ಟೋ ದೂರಗಳಿಂದ ಬರುತಿದ್ದೆ. ಮನದಲ್ಲಿ ಪ್ರಶ್ನೆಗಳಿರಲಿಲ್ಲ. ಆದ್ರೆ ಪ್ರಶ್ನೆಗೆ ಇದ್ದ ಉತ್ತರಗಳ ಪರಿಣಾಮಗಳ ಬಗ್ಗೆ ಮಂಥನ. ಸದ್ಯಕ್ಕೆ ಯಾವುದೇ ತಲೆ ಹೋಗೋ ಸಮಸ್ಯೆ ಇಲ್ಲ. ಆದ್ರೆ ನಾಳೆ ? ಎಸ್, ಇದು ನನ್ನೊಬ್ಬನ ಪ್ರಶ್ನೆ ಅಲ್ಲ, ಅದರ ಸಂಭಂಧ ವ್ಯಾಪ್ತಿ ದೊಡ್ಡದು ಅಂತ ನಾನು ಭಾವಿಸಿದಿನಿ. ಪ್ರಶ್ನೆಯನ್ನೇ ಬದಲಿಸಲಾ ಅಥವಾ ಉತ್ತರನೆ ಬದಲಾಯಿಸಲಾ, ಪ್ರಶ್ನೆಯನ್ನೇ ಮುಚ್ಚಿ ಹಾಕಲಾ, ಅಥವಾ ಉತ್ತರವನ್ನು ಮುಚ್ಚಿ ಇಡಲಾ? I Don't know.
ಅದೆಷ್ಟೋ ದಿನಗಳ ನಂತರ ನಾನು ಅಷ್ಟೊಂದು ಭಾವನಾತ್ಹ್ಮಕವಾಗಿದ್ದೆ ಅನಿಸುತ್ತೆ, ಕಣ್ಣ ಹನಿ ಒತ್ತಿ ಒತ್ತಿ ಬರುತ್ತಿತ್ತು. ಹೋಗುತ್ತಿದ್ದ ದಾರಿಯ ಬಗ್ಗೆ ಪರಿವೆ ಇರಲಿಲ್ಲ. ಬದುಕಿನ ದಾರಿಯ ಮುಂದಿನ ತಿರುವಿನದೆ ಚಿಂತೆ. ವಿಷಯ ವ್ಯಾಪ್ತಿಯ ಅಷ್ಟು ಸಂಭಾವ್ಯ ಲೆಕ್ಕಾಚಾರಗಳನ್ನು ಯೋಚಿಸುವ ಪ್ರಯತ್ನಕ್ಕೆ, ಸಿಕ್ಕ ಮನೆಯ ಬಾಗಿಲು ಇತಿ ಹೇಳಿತ್ತು. ಬೈಕನ್ನು ಗೇಟಿನ ಒಳಗೆ ಹಾಕಿ ಮನೆ ಹೊಕ್ಕರೆ ಅಷ್ಟು ವಿಷಯಗಳ ಮರೆವು ಆವರಿಸಿ ಕೊಳ್ಳುತ್ತಿತ್ತು . ರಾತ್ರಿ ೧೧ ರ ಸಮಯ. ಕಾಲು ಚಾಚಿದ್ದಷ್ಟೇ ನೆನಪು.
ಬೆಳಗು ಎಂದಿನಂತೆ ಬೆಂಗಳೂರಿನ ನಿತ್ಯ ಜೀವನ, ಯೋಚಿಸಲು ಯೋಜಿಸಲು ಅಸಾದ್ಯವಾದ ಬದುಕು, ವಾರದ ಮಟ್ಟಿಗೆ ಭಾವನೆಗಳನ್ನು ಮುಂದೆ ಹಾಕಬೇಕಾದ ಅನಿವಾರ್ಯತೆ. ದಾರಿಯಿಲ್ಲ ವಾಸ್ತವವನ್ನು ಒಪ್ಪಿಕೊಳ್ಳಲೇ ಬೇಕು.
ಭಾವನೆಗಳಿಗೂ ವೇಳಾಪಟ್ಟಿ ಹಾಕುವ ಅನಿವಾರ್ಯತೆ .

Subscribe to:
Comments (Atom)