ಕಣ್ಣು ತೋಯ್ದಿತ್ತು, ಒಬ್ಬನೇ ಅಂಥರ್ಮುಕಿಯಾಗಿ ಅದೆಷ್ಟೋ ದೂರಗಳಿಂದ ಬರುತಿದ್ದೆ. ಮನದಲ್ಲಿ ಪ್ರಶ್ನೆಗಳಿರಲಿಲ್ಲ. ಆದ್ರೆ ಪ್ರಶ್ನೆಗೆ ಇದ್ದ ಉತ್ತರಗಳ ಪರಿಣಾಮಗಳ ಬಗ್ಗೆ ಮಂಥನ. ಸದ್ಯಕ್ಕೆ ಯಾವುದೇ ತಲೆ ಹೋಗೋ ಸಮಸ್ಯೆ ಇಲ್ಲ. ಆದ್ರೆ ನಾಳೆ ? ಎಸ್, ಇದು ನನ್ನೊಬ್ಬನ ಪ್ರಶ್ನೆ ಅಲ್ಲ, ಅದರ ಸಂಭಂಧ ವ್ಯಾಪ್ತಿ ದೊಡ್ಡದು ಅಂತ ನಾನು ಭಾವಿಸಿದಿನಿ. ಪ್ರಶ್ನೆಯನ್ನೇ ಬದಲಿಸಲಾ ಅಥವಾ ಉತ್ತರನೆ ಬದಲಾಯಿಸಲಾ, ಪ್ರಶ್ನೆಯನ್ನೇ ಮುಚ್ಚಿ ಹಾಕಲಾ, ಅಥವಾ ಉತ್ತರವನ್ನು ಮುಚ್ಚಿ ಇಡಲಾ? I Don't know.
ಅದೆಷ್ಟೋ ದಿನಗಳ ನಂತರ ನಾನು ಅಷ್ಟೊಂದು ಭಾವನಾತ್ಹ್ಮಕವಾಗಿದ್ದೆ ಅನಿಸುತ್ತೆ, ಕಣ್ಣ ಹನಿ ಒತ್ತಿ ಒತ್ತಿ ಬರುತ್ತಿತ್ತು. ಹೋಗುತ್ತಿದ್ದ ದಾರಿಯ ಬಗ್ಗೆ ಪರಿವೆ ಇರಲಿಲ್ಲ. ಬದುಕಿನ ದಾರಿಯ ಮುಂದಿನ ತಿರುವಿನದೆ ಚಿಂತೆ. ವಿಷಯ ವ್ಯಾಪ್ತಿಯ ಅಷ್ಟು ಸಂಭಾವ್ಯ ಲೆಕ್ಕಾಚಾರಗಳನ್ನು ಯೋಚಿಸುವ ಪ್ರಯತ್ನಕ್ಕೆ, ಸಿಕ್ಕ ಮನೆಯ ಬಾಗಿಲು ಇತಿ ಹೇಳಿತ್ತು. ಬೈಕನ್ನು ಗೇಟಿನ ಒಳಗೆ ಹಾಕಿ ಮನೆ ಹೊಕ್ಕರೆ ಅಷ್ಟು ವಿಷಯಗಳ ಮರೆವು ಆವರಿಸಿ ಕೊಳ್ಳುತ್ತಿತ್ತು . ರಾತ್ರಿ ೧೧ ರ ಸಮಯ. ಕಾಲು ಚಾಚಿದ್ದಷ್ಟೇ ನೆನಪು.
ಬೆಳಗು ಎಂದಿನಂತೆ ಬೆಂಗಳೂರಿನ ನಿತ್ಯ ಜೀವನ, ಯೋಚಿಸಲು ಯೋಜಿಸಲು ಅಸಾದ್ಯವಾದ ಬದುಕು, ವಾರದ ಮಟ್ಟಿಗೆ ಭಾವನೆಗಳನ್ನು ಮುಂದೆ ಹಾಕಬೇಕಾದ ಅನಿವಾರ್ಯತೆ. ದಾರಿಯಿಲ್ಲ ವಾಸ್ತವವನ್ನು ಒಪ್ಪಿಕೊಳ್ಳಲೇ ಬೇಕು.
ಭಾವನೆಗಳಿಗೂ ವೇಳಾಪಟ್ಟಿ ಹಾಕುವ ಅನಿವಾರ್ಯತೆ .
suri, anappa dodda kavi tara supur agi bardidya kano. tumba channagide. really supur.
ReplyDeletemams i like your Head line matte nin madiro logo adakke nin kottiro soori suru nanage tumba ista aythu modlu yen olle heg kottidane anusthu adre nodud mele yen helbeku gottagtilla......
ReplyDelete