Wednesday, January 5, 2011

ಮುಗ್ಧ (ಗಿದ) ಪ್ರೀತಿಗೆ ಶೀರ್ಷಿಕೆ ಏ(ಬೇ)ಕೆ?

ಹೌದು, ನಾನೊಬ್ಬ ಭಗ್ನ ಪ್ರೇಮಿ. ಬದುಕಿನ ಬದಲಾವಣೆಗೆ ಪ್ರೀತಿಯನ್ನು ಕಳೆದುಕೊಂಡವನು, ಮತ್ತೆಂದು ಪಡೆದುಕೊಳ್ಳಲಾಗದವನು, ಆ ಮಧುರ ಕ್ಷಣಗಳನ್ನು ಮರೆಯಲಾಗದವನು, ಅದರ ನೆನಪುಗಳಲ್ಲೇ ನಗುವಾಗಿರುವವನು...

ನಾನು ಅಷ್ಟೊಂದು ಅಪರಿಮಿತವಾಗಿ ಪ್ರೀತಿಸಿದ್ದ, ಕಳೆದುಕೊಂಡ ಹಾಗೂ ಪದೇ ಪದೇ ನೆನಪಾಗೋ, ಕೊನೆಯವರೆಗೂ ಮರೆಯಲಾಗದ ಆ ಪ್ರೀತಿಯ ಹೆಸರು "ಬಾಲ್ಯ". ಪ್ರತಿಯೊಬ್ಬರ ಬದುಕಿನ ಪ್ರಾರ್ಥಮಿಕ ಘಟ್ಟ. ತಮ್ಮ ತಮ್ಮ ಬಾಲ್ಯವನ್ನು ಪ್ರೀತಿಸಿದವರೆಲ್ಲರೂ  ಬದುಕಿನಲ್ಲಿ ಭಗ್ನ ಪ್ರೇಮಿಗಳೇ... ಕಾರಣ ಅದು ಬದುಕಿನಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ, ನೆನಪೊಂದನ್ನು ಬಿಟ್ಟು.

ನಿಜವಾದ ಪ್ರೀತಿ ಅರ್ಥವಾಗುವುದು ದೂರವಾದ ಮೇಲೆ ಎನ್ನುವಂತೆ ಬಾಲ್ಯ ಕಳೆದ ಮೇಲೆ ನಮಗೆ ಅದರ ಮಹತ್ವ ಅರ್ಥವಾಗುವುದು.

ಬಾಲ್ಯ - ಬದುಕಿನ ಯಾವುದೇ ಚಿಂತೆಯಿಲ್ಲದೆ, ಯಾರಲ್ಲೂ ಭೇದ ಕಾಣದೆ, ತಪ್ಪುಗಳನ್ನು ಮನಸಿನಲ್ಲಿಟ್ಟುಕೊಳ್ಳದೇ, ನಿರ್ಧಾರಗಳನ್ನು ಸಮರ್ಥಿಸಿಕೊಳ್ಳದೇ, ಹಾಗೆ ಬದುಕುವ ನಿಷ್ಕಲ್ಮಶ ಪುಟ್ಟ ಮನಸು.

ದೊಡ್ಡವರಾಗುತಿದ್ದಂತೆ ಲೆಕ್ಕಾಚಾರಗಳು ಪ್ರಾರಂಭ. ಅವರಿಗಿಂತ ನಾವು ಚೆನ್ನಾಗಿರಬೇಕು, ಅವರು ನಮಗೆ ಮೋಸ ಮಾಡಿಬಿಟ್ಟರು, ನಾವು ಮಾಡಿದ ಸಹಾಯ ಅವರಿಗೆ ನೆನಪಿಲ್ಲ.... ಹೀಗೆ ಸಾವಿರ ಸಾವಿರ ಲೆಕ್ಕಾಚಾರಗಳು. ಒಳಗೊಂದು, ಹೊರಗೊಂದು...

ಮುಂದಿನದರ ಪರಿವೆ ಇಲ್ಲದೆ, ಹಿಂದೆ ನಡೆದಿದ್ದರ ಬಗ್ಗೆ ಚಿಂತೆಯಿಲ್ಲದೆ, ಇಂದು ಆನಂದವಾಗಿ ಜೀವನವನ್ನು ಕಳೆಯುವ ಕಾಲಘಟ್ಟಕ್ಕೆ ಬಾಲ್ಯ ಅನ್ನಬಹುದೇನೋ. ದೊಡ್ಡವರಾದ ಮೇಲೆ ಹಾಗೆ ಬದುಕಲು ಸಾಧ್ಯವಿಲ್ಲ. ಪ್ರತಿಷ್ಟೇಗಳಿಗೆ ಬದುಕಬೇಕಾಗುತ್ತದೆ. ಅನಿವಾರ್ಯ....

ಹಾಗಾಗಿ ನಾನೊಬ್ಬ ಬಾಲ್ಯವನ್ನು ಅರ್ಥಾತ್ ನನ್ನ ಪ್ರೀತಿಯನ್ನು ಕಳೆದುಕೊಂಡ ವಿರಹಿ. ಈ ಬದುಕಿನ ಜಂಜಾಟದಲ್ಲಿ ಅದನ್ನು ಮತ್ತೆ ಮತ್ತೆ ಬಯಸುವ ಆಕಾಂಕ್ಷಿ, ನೆನಪುಗಳ ಅಂಗಳದಲ್ಲಿ ವೀಕ್ಷಕ, ಬದುಕಿನ ಹಾದಿಯಲಿ ಪ್ರೇಕ್ಷಕ......

4 comments:

  1. I am very sorry that my comment was painful for you. You got hurt from my comment I am extremely sorry dear. But your article is showing that you r real lover. She must be unlucky. She missed such a wonderful person in her life. Again sorry forgive me.

    Your sister

    ReplyDelete
  2. ನನ್ಗೆ ಏನು ಗೋತ್ತಿಲ್ಲ ಹೇಗೆ ನಾನು ಇವನ್ನನ್ನ ಮೋಸಗಾರ ಅನ್ನೊದ್ದಕಾಗುತ್ತೆ. ಅದರೆ ನಿನ್ನ ಅರ್ಟಿಕಲ್ ತುಂಬಾ ಚೆನ್ನಾಗಿದೆ. ಎಲ್ಲಾ ಮನುಷ್ಯರು ಕಳೆದುಕೊಂಡ ಡೊಡ್ಡ ಸಂತೋಷ ಅಂದ್ರೆ ಅದು ಬಾಲ್ಯನೆ. ನಿನು ಬರೀ ಬಾಲ್ಯ ಕಳೆದುಕೊಂಡಿದ್ದರೆ. ತುಂಬಾ ಸಂತೋಷ ಪಡುವವರಲ್ಲಿ ನಾನೆ ಮೊದಲನೆಯವಳು. ನಿನ್ನ ಭಾವನೆಗಳು ತುಂಬಾ ಚೆನ್ನಾಗಿದೆ. ಬರೆಯುವ ವಿದ ಅದ್ಬುತ. It a compliment. ಕಾಲ್ ಎಳಿತ್ತಿದ್ದಿನಿ ಅಂತ ತಿಳಿದುಕೊಂಡ್ರೆ. I can't help it. All the best for your Bright Future. You Better join some paper. I will eagerly read for your article.

    ReplyDelete
  3. An especially headline in your Blog is very interesting with bracket. That shows your talent.

    Your caring Sis

    ReplyDelete
  4. hey its true naavella namma balya na kalkodidivi ur speaking it out but navenu heltha illa ashte difference

    ReplyDelete